`ಗೋಲ್ಡನ್‍ ಫೇಸ್‍ ಆಫ್‍ ಸೌಥ್‍ ಇಂಡಿಯಾ` ಸ್ಪರ್ಧೆಯಲ್ಲಿ `ಮಿಸ್‍ ಗೋಲ್ಡನ್‍ ಫೇಸ್‍ ಆಫ್‍ ಕರ್ನಾಟಕ` ಆಗಿ ಹರ್ಷಿತಾ ವಿಜೇತರಾಗಿದ್ದಾರೆ
Posted date: 13 Tue, Feb 2024 09:41:02 AM
ಚೆನ್ನೈನಲ್ಲಿ ಇತ್ತೀಚೆಗೆ ಮುಕ್ತಾಯವಾದ `ಗೋಲ್ಡನ್‍ ಫೇಸ್‍ ಆಫ್‍ ಸೌಥ್‍ ಇಂಡಿಯಾ`ಸ್ಪರ್ಧೆಯಲ್ಲಿ .`ಮಿಸ್‍ ಗೋಲ್ಡನ್‍ ಫೇಸ್‍ ಆಫ್‍ ಕರ್ನಾಟಕ` ಆಗಿ ಹರ್ಷಿತಾ ವಿಜೇತರಾಗಿದ್ದಾರೆ ಆ್ಯಸಿಡ್‍ ದಾಳಿಗೆ ತುತ್ತಾದವರಿಗೆ ಚರ್ಮ ದಾನ ಮಾಡುವಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಂಡೋ ಎಂಟರ್‍ಟೈನ್‍ಮೆಂಟ್ಸ್, ಗೋಪಿನಾಥ್‍ ರವಿ ಮತ್ತು ಶರವಣನ್‍ ಹಾಗೂ ಎಸಿಟಿಸಿ ಸ್ಟುಡಿಯೋದ ಹೇಮಂತ್‍ ಜಂಟಿಯಾಗಿ ಈ ಸ್ಪರ್ಧೆಯನ್ನು ಚೆನ್ನೈನ ಹಿಲ್ಟನ್‍ ಹೋಟೆಲ್‍ನಲ್ಲಿ ಆಯೋಜಿಸಿದ್ದರು.
 
ಈ ಸ್ಪರ್ಧೆಯಲ್ಲಿ ನಟಿಯರಾದ ಆ್ಯಮಿ ಜಾಕ್ಸನ್‍ ಮತ್ತು ಶ್ರೇಯಾ ಶರಣ್‍ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರ ಜೊತೆಗೆ ವಿಂಡೋ ಎಂಟರ್‍ಟೈನ್‍ಮೆಂಟ್ಸ್ನ ಮುಖ್ಯಸ್ಥ ಹಾಗೂ ಜನಪ್ರಿಯ ನಿರ್ದೇಶಕ ಎ.ಎಲ್‍. ವಿಜಯ್‍ ಹಾಗೂ ಈ ಸ್ಪರ್ಧೆಯ ರಾಯಭಾರಿಯಾದ ಪಾರ್ವತಿ ನಾಯರ್ ಸಹ ಹಾಜರಿದ್ದರು.
 
ಈ ಬಾರಿ ಕರ್ನಾಟಕ, ತಮಿಳು ನಾಡು, ತೆಲಂಗಾಣ ಹಾಗೂ ಕೇರಳದಿಂದ 1000ಕ್ಕೂ ಹೆಚ್ಚು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹಲವು ಸುತ್ತುಗಳ ಬಳಿಕ ಫೈನಲ್ಸ್ ಸುತ್ತಿಗೆ 51 ಸ್ಪರ್ಧಿಗಳು ಅಂತಿಮವಾಗಿದ್ದು, ಅದರಲ್ಲಿ ಹಲವು ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲಾಯಿತು. ಈ ಪೈಕಿ, ಕರ್ನಾಟಕದ ಹರ್ಷಿತಾ ಎ, ‘ಮಿಸ್‍ ಗೋಲ್ಡನ್‍ ಫೇಸ್‍ ಆಫ್‍ ಕರ್ನಾಟಕ’ ಆಗಿ ಆಯ್ಕೆಯಾಗಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed